Saturday, January 21, 2017

ಕೇಳದೆ ನಿಮಗೀಗ ..!

*ಸುಮ್ ಸುಮ್ನೆ ಜನಿಸಿದ ಪ್ರೀತಿ*

ಬಸ್ಸಿನ ಕಿಟಕಿಯಿಂದ ಬೀಸುತ್ತಿರುವ ಆ ಗಾಳಿಗೆ ಅವಳ ತಲೆಕೂದಲುಗಳು ಎತ್ತಲಿಂದೆತ್ತಲೋ ಹಾರಾಡುತ್ತಿರುವುದನ್ನು ನೋಡುತ್ತಿದ್ದರೆ ,ಕಡಲ ಅಲೆಗಳಿಗೆ ಮೈಯೊಡ್ದಿ ಮನಸೋತು ನಿನಂತಂತೆ ಎಂದು ನನ್ನ ಹ್ರದಯವು ನನ್ನ ತಲೆಗೆ ಕುಟ್ಟಿ ಕುಟ್ಟಿ ಹೇಳಿದಂತಿದೆ. ನಾನು ಹಿಂದಿನ ಸೀಟಿನಲ್ಲಿ ಇದ್ದು,ಅವಳು ನನ್ನಿಂದ ಸ್ವಲ್ಪ ದೂರದ ಸೀಟಿನಲ್ಲಿ ಕುಳಿತಿದ್ದರೂ,ನನ್ನ ಗಮನ ಅವಳ ಮೇಲೆಯೆ ಯಾಕೆ ಬೀಳಬೇಕಿತ್ತಲ್ಲವೇ ? ನನ್ನ ಕಣ್ಣಿಗೆ ಅವಳು ಕಾಣೆಸಬೇಕೆಂದರೆ ದೇವರೇ ಅವಳನ್ನು ನನಗಾಗಿ ಈ ಹಳೇಯ ಬಸ್ಸಿನಲ್ಲಿ ತಂದು ಕುಳ್ಳಿರಿಸಿದ್ದಾರೆಂದು ಹೇಳಿದರೆ ನನ್ನದು ಯಾಕೂ ಓವರ್ ಆಯಿತು ಎಂದು ನೀವು ಹೇಳುತ್ತೀರಿ , ಅದಕ್ಕೆ ನಾನು ಹಾಗೆ ಹೇಳುವುದಿಲ್ಲ ,,!

ಆದರೂ ಈ ಬಸ್ಸಿನಲ್ಲಿ ನಾನೋಬ್ಬನೇ ತುಂಬಾ ಸುಂದರವಾದ ಯುವಕ ಎಂದು ನೀವು ಖಂಡಿತ ಒಪ್ಪಿಕೊಳ್ಳುತ್ತೀರಿ ಎಂದು ನನಗೆ ಗೊತ್ತು ..ನಾನೊಬ್ಬ ಸುಂದರ ಯುವಕ ,,ಅವಳೊಬ್ಬಳು ಸುಂದರ ಯುವತಿ ಅವಳ ಪಕ್ಕದ ಸೀಟು ಬೇರೆ ಖಾಲಿ ಇದೆ ,ನಾನು ಆ ಸೀಟಿನಲ್ಲಿ ಹೋಗಿ ಕೂರಲೆ ?
ಬೇಡ ಅವಳು  ನನ್ನ ಬಗ್ಗೆ ತಪ್ಪು ತಿಳಿದರೆ ?
ನಾನೀಗ ಏನು ಮಾಡಲಿ ಬೇಗ ಹೇಳಿ,,! ಹೋಗಲಾ?

ಅಯ್ಯಯ್ಯೋ,.ನೀವು ಹೇಳಬೇಕಾದ್ರೆ ತಡಮಾಡಿದ್ರಿ,.ನೋಡಿ ಅಲ್ಲೊಬ್ಬ ಕರ್ರಗಿನ ಮನುಷ್ಯ ಅವಳ ಪಕ್ಕ ಕುಳಿತೇ ಬಿಟ್ಟ ನೋಡಿ..ನನಗೆ ಬರುತ್ತಿರುವ ಸಿಟ್ಟಿಗೆ ...! ಏನು ? ಯಾಕೋ ಜಾಸ್ತಿ ಆಯ್ತು ಅನ್ತಾ ಇದ್ದೀರ ? ಮತ್ತೆ ಅವಳು ನನ್ ಕಣ್ಣಿಗೆ ಬಿದ್ದವ್ಳು ಅವನು ಹೋಗಿ ಕೂತುಕೊಳ್ಳಬೇಕಾದರೆ ಎಷ್ಟು ಉರಿಯಲ್ಲ ಹೇಳಿ ...

ಅರೆ..ಅವಳು ಎದ್ದು ಹೋರಡುತ್ತಿದ್ದಾಳೆ.. ಅವಳ ಸ್ಟಾಫ್ ಬಂತು ಎಂದು ಕಾಣೆಸುತ್ತದೆ ..ನಾನು ಇಲ್ಲಿ ಇಳಿದು ಅವಳನ್ನು ಹಿಂಬಾಲಿಸಲೆ ?ನೀವೇನಂತೀರಿ ?

ಹಾಂ..!ಯಾರದು ಪುಟ್ಟ ಹುಡುಗಿ ಅವಳನ್ನು ಮಮ್ಮಿ ಎಂದು ಕರೆದಳಲ್ಲಾ....?!!

ಆ ಪುಟ್ಟ ಹುಡುಗಿ ಕೈ ಹಿಡ್ಕೊಂ‌‌ಡು‌ ಅವಳು ಇಳಿದು ಹೋಗೇ ‌ಬಿಟ್ಟಳು‌ ನೋಡಿ...! ಈಗ ನಾನೇನು ಮಾಡಲಿ ? ಏನಾದರು ಹೇಳಿ..ನನ್ನ ಮಾತು ಕೇಳದೆ ನಿಮಗೀಗ ?

ಬರೆದವ ನಿಮ್ಮವ :- ಮಯೂರ್.ಆರ್.ಶೆಟ್ಟಿ.


12 comments: