Tuesday, February 14, 2017

ನಾನು ಕಂಡ ಮಿಜಾರಿನ ಕಂಬಳ

ಮಿಜಾರಿನಲ್ಲಿ ನಡೆಯುತ್ತಿದ್ದ ಕೋಟಿ ಚೆನ್ನಯ್ಯ ಕಂಬಳದ ನೆನಪಿದ್ದವರಿಗೆ ನನ್ನ ಲೇಖನದ ಶೀರ್ಶಿಕೆ ನೋಡಿ ನಗು ಬರಬಹುದು ,,ಅಲ್ಲ ಮಾರ್ರೆ ಮಿಜಾರಿನಲ್ಲಿ ಕಂಬಳ ಆಗುವ ಸಮಯದಲ್ಲಿ ಇವ ಹುಟ್ಲೇ ಇಲ್ಲ ..! ಮತ್ತೆ ಇವನು ಯಾವಾಗ ಮಿಜಾರು ಕಂಬಳ ನೋಡಿದ ಎಂದು ನೀವು ತಲೆ ಕೆರೆದುಕೊಳ್ಳಬಹುದು ...ಆದರೆ ನಾನು ಮಾತ್ರ ನೊಡಿದ್ದೇನೆ ಮಾರ್ರೆ ,,!  

ಹೇಗೆ ಅಂತೀರಾ? ‌ಸಾಹಸಸಿಂಹ‌ ವಿಷ್ಣುವರ್ಧನ್ ರವರು ಅಭಿನಯಿಸಿರುವ " ರುಧ್ರನಾಗ " ಚಲನಚಿತ್ರದಲ್ಲಿ ! 

ಹೌದು ಮಾರ್ರೆ ವಿಷ್ಣುವರ್ಧನ್ ನಮ್ಮ ಊರಿಗೆ ಬಂದು ಕಂಬಳದ ಕೋಣಗಳನ್ನು ಕಂಬ್ಲದ ಕರೆಯಲ್ಲಿ ಓಡಿಸುವಿದನ್ನು ಟೀವಿಯಲ್ಲಿ ರುಧ್ರನಾಗ ಕನ್ನಡ ಚಲನಚಿತ್ರಲ್ಲಿ ನೋಡಿದಾಗ ನಮ್ಮ ಊರಿನ ಅದ್ದೂರಿಯಾದ ಕಂಬಳವನ್ನೊಮ್ಮೆ ನೋಡಿ ಬಹಳ ಸಂತೋಷವಾಯಿತು ,,ಮಾರನೆಯ ದಿನ ಕಂಬಳ ನಡೆಯುತ್ತಿದ್ದ ಆ ಜಾಗವನ್ನೊಮ್ಮೆ ನೋಡಿದಾಗ ಅಲ್ಲಿ ಆಡಿಕೆಯ ತೋಟ ತಲೆ ಎತ್ತಿ ನಿಂತಿತ್ತು (ಈಗಲೂ ಆ ಜಾಗದಲ್ಲಿ ತೋಟವಿದೆ ) ,,ಆದರೂ ಈಗಲೂ ನಮ್ಮ ಊರಿನ ಕೆಲವು ಹಿರಿಯರು ಅಂದು ನಡೆದ ಕಂಬಳದ  ಚಿತ್ರೀಕರಣವನ್ನು ನೆನೆಸಿಕೊಂಡು ಅಂದಿನ ನೆನಪುಗಳನ್ನು ಬಿಚ್ಚಿಟ್ಟಾಗ ಆ ಮಿಜಾರು ಕಂಬಳ ಕಣ್ಣಿಗೆ ಕಟ್ಟಿದ ಹಾಗೆ ಹಾಗುತ್ತದೆ ..ಇತ್ತೀಚಿಗೆ ಗೆಳೆಯ ಉಮೇಶಣ್ಣ(ಕಲಾವಿದ ಉಮೇಶ್ ಮಿಜಾರ್) ಶಾಲೆಗೆ ಚಕ್ಕರ್ ಹೊಡೆದು ಕಂಬಳದ ಶೂಟಿಂಗ್ ನೋಡಲು ಹೋಗಿದ್ದ ದಿನಗಳನ್ನು ನೆನೆಸಿಕೊಂಡಾಗ..
ನಾನು ಕೂಡಾ ಆ ಸಂಭ್ರಮದಲ್ಲಿ ಭಾಗಿಯಾಗಬಾರದಿತ್ತೇ ಎಂಬ ಕೊರಗು ಮನದ ಮೂಲೆಯಲ್ಲಿ ಅಡಗಿ ಕುಳಿತಿತು ..

ಬರೆದವ :-ಮಯೂರ್.ಆರ್.ಶೆಟ್ಟಿ